ಶನಿವಾರದಿಂದ ಜಾತಿಗಣತಿ ಆರಂಭ: ನೀವು ಏನು ಮಾಹಿತಿ ನೀಡಬೇಕು?(PSG)

ಶನಿವಾರದಿಂದ ಜಾತಿಗಣತಿ ಆರಂಭ: ನೀವು ಏನು ಮಾಹಿತಿ ನೀಡಬೇಕು?(PSG)

- ಏಪ್ರಿಲ್ 11ರಿಂದ ಏ.30 ರವರೆಗೆ ಜಾತಿಗಣತಿ
- 55 ಪ್ರಶ್ನೆಗಳನ್ನು ಕೇಳುತ್ತಾರೆ ಗಣತಿದಾದರು
- ಜಾತಿ ಗಣತಿ ಅರ್ಜಿಯಲ್ಲಿ ನಿಮ್ಮ ಸಹಿ ಕಡ್ಡಾಯ

ಬೆಂಗಳೂರು: ಶನಿವಾರದಿಂದ ಜಾತಿ ಜನಗಣತಿ ಆರಂಭವಾಗಲಿದೆ. ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕಸುಬು, ಜಾತಿ ಸೇರಿದಂತೆ ನಿಮ್ಮ ಮನೆಯ ಸದಸ್ಯರ ಎಲ್ಲರ ವಿವರಗಳನ್ನ ಪಡೆಯಲಿದ್ದಾರೆ ಗಣತಿದಾದರು.
ರಾಜ್ಯದಲ್ಲಿ ಸುಮಾರು 6.50 ಕೋಟಿ ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದ್ದು, ಸುಮಾರು 1.26 ಲಕ್ಷ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ ಗಣತಿ ನಡೆಯಲಿದೆ. ಏಪ್ರಿಲ್ 11ರಿಂದ ಏ.30 ರವರೆಗೆ ಜಾತಿಗಣತಿ ನಡೆಯಲಿದೆ. ಸುಮಾರು 1500ಕ್ಕೂ ಹೆಚ್ಚು ಜಾತಿಗಳ ಪಟ್ಟಿಯನ್ನು ನೀಡಲಾಗಿದ್ದು, ಜಾತಿ ಜನಗಣತಿ ವೇಳೆ ಜಾತಿಗಳಿಗೆ ಕೋಡ್ ಕೂಡ ನೀಡಲಾಗಿದೆ.
ನೀವು ನಿಮ್ಮ ಜಾತಿಯ ಹೆಸರು ಹೇಳಿದರೆ ಗಣತಿದಾರ ಜಾತಿ ಹೆಸರನ್ನು ನಮೂದಿಸುವುದಿಲ್ಲ. ಬದಲಾಗಿ ಜಾತಿಗೆಂದು ನಿಗದಿಯಾಗಿರುವ ಪ್ರತ್ಯೇಕ ಕೋಡ್‍ನ್ನು ನಮೂದಿಸುತ್ತಾರೆ. ಹೀಗಾಗಿ ಜಾತಿ ಕೋಡ್ ನಮೂದಿಸುವಾಗ ಗಮನಿಸಿ ಎಚ್ಚರ ತಪ್ಪಬೇಡಿ.
ಸುಮಾರು 1.33 ಲಕ್ಷ ಗಣತಿದಾರರು ಜಾತಿ ಜನಗಣತಿಗೆ ಸಂಯೋಜನೆಗೊಂಡಿದ್ದು, ಒಬ್ಬ ಗಣತಿದಾರ 120 ರಿಂದ 150 ಮನೆಗಳನ್ನು ಗಣತಿ ನಡೆಸುತ್ತಾರೆ. ನಿಮ್ಮ ಮಾಹಿತಿಯನ್ನು ಸರಿಯಾಗಿ ನಮೂದಿಸಿಕೊಳ್ಳದ ಗಣತಿದಾರರ ವಿರುದ್ಧವೂ ದೂರು ನೀಡಬಹುದಾಗಿದ್ದು, ಆಯೋಗಕ್ಕೆ ಆನ್‍ಲೈನ್ ಮೂಲಕ ದೂರು ಸಲ್ಲಿಸಬಹುದು.
ಹಾಗಾದ್ರೆ ಒಟ್ಟಾರೆ ಜಾತಿ ಜನಗಣತಿ ಹೈಲೈಟ್ಸ್ ಏನು? ಜಾತಿ ಜನಗಣತಿ ಹೇಗೆ ನಡೆಯುತ್ತದೆ ಜಾತಿ ಜನಗಣತಿಯ ಉದ್ದೇಶ ಏನು ಎನ್ನುವುದರ ಕಿರು ಮಾಹಿತಿ ಇಲ್ಲಿದೆ.

ಜಾತಿ ಜನಗಣತಿಯ ಹೈಲೈಟ್ಸ್

> 84 ವರ್ಷಗಳ ಬಳಿಕ ರಾಜ್ಯದಲ್ಲಿ ಜಾತಿಗಣತಿ
> ಏಪ್ರಿಲ್ 11ರಿಂದ ಏಪ್ರಿಲ್ 30ರವರೆಗೆ ಗಣತಿ
> ರಾಜ್ಯದಲ್ಲಿ ಏಕಕಾಲದಲ್ಲಿ ಜಾತಿಗಣತಿ ಆರಂಭ
> 1.26 ಲಕ್ಷ ಕುಟುಂಬ, ಅಂದಾಜು 6.4 ಕೋಟಿ ಜನಸಂಖ್ಯೆ
> 1.33 ಲಕ್ಷ ಗಣತಿದಾರರಿಂದ ನಡೆಯಲಿದೆ ಸಮೀಕ್ಷೆ
> ಒಬ್ಬ ಗಣತಿದಾರನಿಂದ 120ರಿಂದ 150 ಮನೆಗಳ ಸಮೀಕ್ಷೆ
> ಜಾತಿ ಜನಗಣತಿಗೆ ಅಂದಾಜು 185 ಕೋಟಿ ರೂ. ವೆಚ್ಚ
> ಜಾತಿ ಜನಗಣತಿ ಗಣಕೀಕರಣ, 3 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣ
ಜಾತಿ ಗಣತಿ ಹೇಗೆ ನಡೆಸುತ್ತಾರೆ?
> ನಿಮ್ಮ ಮನೆಗೆ ಬರುತ್ತಾರೆ ಗಣತಿದಾರ
> ಗಣತಿದಾರನ ಐಡಿ ಕಾರ್ಡ್ ಪರೀಕ್ಷಿಸಿ, ಮಾಹಿತಿ ನೀಡಿ
> ಗಣತಿಯಲ್ಲಿ 55 ಪ್ರಶ್ನೆಗಳನ್ನು ಕೇಳಲಾಗುತ್ತದೆ
> ಜಾತಿ,ಕಸುಬು, ಶೈಕ್ಷಣಿಕ, ಆದಾಯದ ಬಗ್ಗೆಯೂ ಪ್ರಶ್ನೆ
> ಒಟ್ಟು 1500ಕ್ಕೂ ಹೆಚ್ಚು ಜಾತಿಗಳ ಪಟ್ಟಿ ಇದೆ
> ನಿಮ್ಮ ಜಾತಿಗೆ ಅನುಗುಣವಾಗಿ ಕೋಡ್ ನಮೂದಿಸುತ್ತಾರೆ
> ಗಣತಿದಾರ ತಪ್ಪು ಮಾಹಿತಿ ನಮೂದಿಸಿದರೆ ದೂರು ನೀಡಿ
> ಆಯೋಗಕ್ಕೆ ಆನ್‍ಲೈನ್ ದೂರು ಸಲ್ಲಿಸಬಹುದು
> ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರೆ ನಿಮಗೆ ಒಳಿತು
> ಜಾತಿ ಗಣತಿ ಅರ್ಜಿಯಲ್ಲಿ ನಿಮ್ಮ ಸಹಿ ಕಡ್ಡಾಯ
> ಗಣತಿದಾರನ ಸಹಿ, ಸಾಕ್ಷಿದಾರನ ಸಹಿಯೂ ಕಡ್ಡಾಯ
> ಗಣತಿದಾರ ಬಂದಾಗ ಮನೆಯಲ್ಲಿರದಿದ್ದರೆ ಇನ್ನೊಮ್ಮೆ ಬರುತ್ತಾರೆ.

* ಜಾತಿಗಣತಿಯ ಉದ್ದೇಶ ಏನು?

> ಸಾಮಾಜಿಕ, ಶೈಕ್ಷಣಿ, ಆರ್ಥಿಕ ಸಮೀಕ್ಷೆ
> ಉದ್ಯೋಗದ ಅಂಕಿ-ಅಂಶಗಳನ್ನ ಗುರುತಿಸುವುದು
> ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕ
> ಸಣ್ಣ-ಪುಟ್ಟ ಜಾತಿಗಳ ಗುರುತಿಸಿ ಅಭಿವೃದ್ಧಿ
> ಮೀಸಲಾತಿ ಕಲ್ಪಿಸುವ ವೇಲೆ ಗಣತಿ ಪರಿಗಣನೆ

Comments

Popular posts from this blog

IT CALULATION 2023-24(AY)

*ಪೊಲೀಸ್ ಸಬ್-ಇನ್ಸ್ಪೆಕ್ಟರ್( ನಿಸ್ತಂತು)(ಪುರುಷ & ಮಹಿಳಾ) ಹುದ್ದೆಗಳ ಕೀ ಉತ್ತರಗಳು ಪ್ರಕಟ*

SSLC RESULT 2023